Call for Presentation Abstracts | Udaka – Learnings from Arts Education: A Regional Conference | Deadline Extended: January 07, 2024 (CLOSED)
ಕರಾವಳಿ ಕರ್ನಾಟಕ ಉಡುಪಿ, ಉತ್ತರಕನ್ನಡ, ಮತ್ತು ದಕ್ಷಿಣ ಕನ್ನಡ ಜಿಲ್ಲೆ
ಪ್ರಾದೇಶಿಕ ಸಮ್ಮೇಳನ
ಉದಕ - ಕಲಾ ಶಿಕ್ಷಣದ ಪಾಠಗಳು
ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಐ ಎಫ್ ಎ)
ವಿಚಾರ ಮಂಡನೆಯ ಸಾರಾಂಶಗಳನ್ನು ಪ್ರಸ್ತುತಪಡಿಸಲು ಆಹ್ವಾನ
ಸಾರಾಂಶಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ Sunday, January 07, 2024
Udaka – Learnings from Arts Education
A Regional Conference organised by India Foundation for the Arts (IFA)
Call for Presentation Abstracts
Coastal Karnataka Uttara Kannada, Dakshina Kannada and Udupi Districts
Deadline for Submissions Extended to Sunday, January 07, 2024
Click here to read the call in English
‘ಉದಕ - ಕಲಾ ಶಿಕ್ಷಣದ ಪಾಠಗಳು’ ಎಂಬ ಕರಾವಳಿ ಕರ್ನಾಟಕದ ಸಮಾವೇಶದಲ್ಲಿ ತಮ್ಮ ವಿಚಾರ ಮಂಡನೆಯ ಸಾರಾಂಶಗಳನ್ನು ಪ್ರಸ್ತುತಪಡಿಸಲು ಆಹ್ವಾನಿಸುತ್ತಿದ್ದೇವೆ. ಈ ಪ್ರಸ್ತುತಿಗಳು ಲಿಖಿತಪತ್ರಿಕೆ, ಕಾರ್ಯಾಗಾರಗಳು, ಉಪನ್ಯಾಸ ಪ್ರದರ್ಶನಗಳು, ದುಂಡುಮೇಜಿನ ಚರ್ಚೆಗಳು, ಮಾರ್ಗದರ್ಶಿ ಚಲನಚಿತ್ರ ವೀಕ್ಷಣೆಗಳು, ಪ್ರದರ್ಶನ ಮಾತುಕತೆಗಳು ಮತ್ತು ಸೂಕ್ತವೆಂದು ಪರಿಗಣಿಸಲಾದ ಯಾವುದೇ ರೂಪದಲ್ಲಿರಬಹುದು. ಈ ಮೂಲಕ ಪರಿಕಲ್ಪನೆಗಳು, ಪ್ರಯೋಗಗಳು, ಪರಿಶೋಧನೆಗಳು ಮತ್ತು ಕಲಾಸಂಯೋಜಿತ ಅನುಭವಗಳ ಹಂಚಿಕೆಯನ್ನು ಸಾಧ್ಯವಾಗಿಸುತ್ತದೆ. ಕಲಿಕೆಯ ವಿಧಾನಗಳು. ಸೃಜನಶೀಲ ಮತ್ತು ನವೀನ ಪ್ರಸ್ತುತಿಗಳನ್ನು ನಾವು ಪ್ರೋತ್ಸಾಹಿಸುತ್ತೇವೆ.
ಸಮಾವೇಶದ ಎಲ್ಲಾ ಚರ್ಚೆಗಳು ಮುಖ್ಯವಾಗಿ ಕನ್ನಡದಲ್ಲಿ ನಡೆಯಲಿದ್ದು, ಸ್ಥಳೀಯವಾಗಿ ಮಾತನಾಡುವ ತುಳು, ಅರೆಕನ್ನಡ, ಬ್ಯಾರಿ ಮರಾಠಿ, ಕೊಂಕಣಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಹ ಪ್ರಸ್ತುತಪಡಿಸಬಹುದು.
ಕರಾವಳಿ ಕರ್ನಾಟಕದ ಈ ಸಮಾವೇಶವು ಕಲಾ ವಿದ್ವಾಂಸರು, ಕಲಾವಿದರು, ಕಲಾ ಶಿಕ್ಷಣತಜ್ಞರು, ಶಿಕ್ಷಕರು ಮತ್ತು ಆಡಳಿತಗಾರರನ್ನು ಒಂದು ವೇದಿಕೆಗೆ ತಂದು ಸ್ಥಳೀಯ ಕಲೆಯ ಮೂಲಕ ವಿದ್ಯಾರ್ಥಿಗಳ ಜೀವನವನ್ನು ಮತ್ತು ತರಗತಿಯ ಬೋಧನೆ-ಕಲಿಕೆಯ ಅನುಭವಗಳನ್ನು ಹೇಗೆ ಶ್ರೀಮಂತಗೊಳಿಸಬಹುದು ಎಂಬುದನ್ನು ಚರ್ಚಿಸುವಂತೆ ಮಾಡುವ ಗುರಿಯನ್ನು ಹೊಂದಿದೆ. ಶಿಕ್ಷಕರು, ಕಲಾವಿದರು ಮತ್ತು ಕಲಾ ಶಿಕ್ಷಣತಜ್ಞರು ಪಠ್ಯಕ್ರಮದಲ್ಲಿ ಸಮನ್ವಯತೆಯನ್ನು ಸಾಧಿಸಲು ಕಲೆಯ ವಿವಿಧ ಪ್ರಕಾರಗಳು ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ. ಇದಲ್ಲದೆ, ತರಗತಿಗಳಲ್ಲಿ ಕಲೆಗಳನ್ನು ಬಳಸುವ ಬಗ್ಗೆ ಸೃಜನಾತ್ಮಕವಾಗಿ ಯೋಚಿಸಲು ಶಾಲಾ ಆಡಳಿತವನ್ನು ಪ್ರೋತ್ಸಾಹಿಸಲು ಸಮ್ಮೇಳನವು ಉದ್ದೇಶಿಸಿದೆ.
ವಿಚಾರ ಮಂಡನೆಯ ಸಾರಾಂಶಗಳನ್ನು ಸಲ್ಲಿಸಲು ಸೂಚನೆಗಳು:
-
ವಿಚಾರ ಮಂಡನೆಯ ಸಾರಾಂಶಗಳು ಗರಿಷ್ಠ 250 ಪದಗಳಲ್ಲಿ ಇರಬಹುದು ಮತ್ತು ಸ್ಪಷ್ಟ ಶೀರ್ಷಿಕೆಯನ್ನು ಹೊಂದಿರಬೇಕು.
-
ಪ್ರಸ್ತುತಿಗಳು ಈ ಕೆಳಗಿನ ವಿಷಯಗಳನ್ನು ಪರಿಗಣಿಸಬಹುದು (ಆದರೆ ಇದಕ್ಕೆ ಸೀಮಿತವಾಗಿರಬೇಕೆಂದಿಲ್ಲ):
- ಕರಾವಳಿ ಕರ್ನಾಟಕದ ಸ್ಥಳೀಯ ಸಂಪನ್ಮೂಲಗಳು ಮತ್ತು ಅಂತರಶಿಸ್ತೀಯ ಪಠ್ಯಕ್ರಮಗಳು: ಕಲಾ ಸಂಯೋಜಿತ ಪಠ್ಯಕ್ರಮದ ಅಭಿವೃದ್ಧಿ, ಬೋಧನೆ ಮತ್ತು ಕಲಿಕೆ.
- ಆಧುನಿಕ ಡಿಜಿಟಲ್ ಯುಗದಲ್ಲಿ ಸ್ಥಳೀಯ ಕಲೆಗಳನ್ನು ದಾಖಲಿಸುವುದು, ಸಂಶೋಧಿಸುವುದು, ಪ್ರತಿನಿಧಿಸುವುದು ಶಾಲಾ ಶಿಕ್ಷಣಕ್ಕೆ ಪರಿವರ್ತಿಸುವುದು.
- ಕರಾವಳಿ ಕರ್ನಾಟಕದ ಇತಿಹಾಸಗಳು ಮತ್ತು ಸಾಂಸ್ಕೃತಿಕ ಆಚರಣೆಗಳೊಂದಿಗೆ ಸಂಪರ್ಕ ಹೊಂದಿದ ಸ್ಥಳೀಯ ಪ್ರದೇಶಗಳ ಪರಿಶೋಧನೆಗಳು.
- ಕರಾವಳಿ ಕರ್ನಾಟಕದ ಭಾಷೆಗಳಲ್ಲಿ ಶಾಲಾ ಪಠ್ಯಕ್ರಮಗಳ ವಿಚಾರಗಳನ್ನು ಅವಲೋಕಿಸುವುದು ಹಾಗು ಕಲಾ ಸಂಯೋಜಿತ ಚರ್ಚೆಗಳನ್ನು ನಡೆಸುವುದು.
- ಪ್ರಸ್ತುತಿಯ ಸ್ವರೂಪವನ್ನು ಸ್ಪಷ್ಟವಾಗಿ ನಮೂದಿಸಬೇಕು. (ಲಿಖಿತ, ಕಾರ್ಯಾಗಾರ, ಮಾರ್ಗದರ್ಶಿ ಚಲನಚಿತ್ರ ಪ್ರದರ್ಶನ ಇತ್ಯಾದಿ.)
-
ಪ್ರಸ್ತುತಪಡಿಸಲು ಬೇಕಾದ ಸಮಯವನ್ನು ಸಹ ಸ್ಪಷ್ಟವಾಗಿ ನಮೂದಿಸಬೇಕು. ಲಿಖಿತ ಪತ್ರಿಕೆ 15 ನಿಮಿಷಗಳಲ್ಲಿ, ಪ್ರಾತ್ಯಕ್ಷಿಕೆಗಳು ಮತ್ತು ಪ್ರದರ್ಶನ ಮಾತುಕತೆಗಳು 40 ನಿಮಿಷಗಳಲ್ಲಿ, ಮತ್ತು ಕಾರ್ಯಾಗಾರಗಳು ಮತ್ತು ಮಾರ್ಗದರ್ಶಿ ಚಲನಚಿತ್ರ ಪ್ರದರ್ಶನಗಳು 2 ಗಂಟೆಗಳ ಒಳಗೆ ಇರುವಂತೆ ಸೂಚಿಸಲಾಗಿದೆ.
-
ಪ್ರತಿ ಸಾರಾಂಶ ಸಲ್ಲಿಕೆಯು ಹೆಸರು, ವಿಳಾಸ, ಇಮೇಲ್ ಮತ್ತು ಫೋನ್ ಸಂಖ್ಯೆ ಇರುವ ಒಂದು ಪುಟದ ಸ್ವಪರಿಚಯದೊಂದಿಗೆ ಇರಬೇಕು.
ಕೊನೆಯ ದಿನಾಂಕ: Sunday, January 07, 2024
ಆಯ್ಕೆ ವಿಧಾನ:
- ವಿಚಾರ ಮಂಡನೆಯ ಸಾರಾಂಶದ ಆಯ್ಕೆಯನ್ನು ಸ್ಪಷ್ಟ ಕಲ್ಪನೆ, ಸಾಂದರ್ಭಿಕ ಪರಿಚಯ ಮತ್ತು ನಾವಿನ್ಯತೆಯ ಅಂಶಗಳ ಆಧಾರದ ಮೇಲೆ ಮಾಡಲಾಗುವುದು. ಈ ಮೌಲ್ಯಮಾಪನವನ್ನು ಚಿಂತನೆಗಳ ಪ್ರಸ್ತುತತೆ ಹಾಗೂ ಅಸಲೀತನವನ್ನು ಕೂಡ ಪರಿಗಣಿಸಲಾಗುವುದು. ಸೂಕ್ತ ಮಾಹಿತಿಗಳಿರದ ಸಲ್ಲಿಕೆಗಳನ್ನು ಪರಿಗಣಿಸಲಾಗುವುದಿಲ್ಲ.
- ಸ್ವೀಕೃತವಾದ ಲೇಖನ ಗಳನ್ನು ಪೂರ್ಣ ರೂಪದಲ್ಲಿ ಜನವರಿ 31, 2024ರ ಒಳಗೆ ಸಲ್ಲಿಸಬೇಕಾಗುತ್ತದೆ. ಪ್ರಾಯೋಗಿಕ ಪ್ರಸ್ತುತಿಯಾದರೆ ಗುರಿಗಳ ವಿವರವಾದ ಪಟ್ಟಿ ಸಲ್ಲಿಸಬೇಕಾಗುತ್ತದೆ
- ಲೇಖಕರ ಗೈರುಹಾಜರಿಯಲ್ಲಿ ಇತರರು ಪ್ರಸ್ತುತ ಪಡಿಸಲು ಅವಕಾಶ ಇರುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.
- ಲೇಖನ ರೂಪದ ಪ್ರಸ್ತುತಿಗಳನ್ನು ಐಎಫ್‌ಎ ಅವುಗಳ ವಿಷಯಗಳನ್ನು ಆಧರಿಸಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟಿಸುವುದು.
- ನಿಮ್ಮ ವಿಚಾರ ಮಂಡನೆಯ ಸಾರಾಂಶಗಳನ್ನು ಕೃಷ್ಣಮೂರ್ತಿ ಟಿ.ಎನ್. ರವರಿಗೆ ‘ಉದಕ -ಕಲಾ ಶಿಕ್ಷಣದ ಪಾಠಗಳು’ ವಿಚಾರ ಮಂಡನೆಯ ಸಾರಾಂಶ’ ಎಂಬ ವಿಷಯದೊಂದಿಗೆ krishna@indiaifa.org ಈ-ಮೇಲ್ ಮಾಡಿ.
- ಯಾವುದೇ ಪ್ರಶ್ನೆಗಳಿದ್ದಲ್ಲಿ krishna@indiaifa.org ಗೆ ಬರೆಯಿರಿ ಅಥವಾ +91 8762954080 ಗೆ ಕರೆ ಮಾಡಿ.
ಕಲಾ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಆಯೋಜಿಸಿದ ಪ್ರಾದೇಶಿಕ ಸಮ್ಮೇಳನವು ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಮತ್ತು ಫೈನಾನ್ಸ್ ಕಂಪನಿಯ ಬೆಂಬಲದೊಂದಿಗೆ ಸಾಧ್ಯವಾಗಿದೆ.