Connecting the Dots – Lessons from Arts Education: A Regional Conference | February 22-24, 2023, Kalaburagi
ಬಿಂದುಗಳನ್ನು ಸೇರಿಸುವುದು - ಕಲಾ ಶಿಕ್ಷಣದ ಕಲಿಕೆಗಳು
ಸ್ಥಾನೀಯ ಸಮ್ಮೇಳನ
ಆಯೋಜನೆ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಐಎಫ್‌ಎ)
೨೨, ೨೩ ಮತ್ತು ೨೪ ಫೆಬ್ರುವರಿ ೨೦೨೩
ಮಾತೋಶ್ರೀ ನೀಲಗಂಗಮ್ಮ ಅಂದಾನಿ ಆರ್ಟ್ ಗ್ಯಾಲರಿ
ಐಡಿಯಲ್ ಫೈನ್ ಆರ್ಟ್ ಸೊಸೈಟಿ ಕ್ಯಾಂಪಸ್, ಮಹಾನಗರ ಪಾಲಿಕೆ ಹತ್ತಿರ, ಕಲಬುರಗಿ
Click here for the schedule in English
ಕಳೆದ ದಶಕದಲ್ಲಿ ಕರ್ನಾಟಕದಾದ್ಯಂತ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಐಎಫ್‌ಎ) ಸಂಸ್ಥೆಯು ತನ್ನ 'ಕಲಾ ಶಿಕ್ಷಣ' ಕಾರ್ಯಕ್ರಮದ 'ಕಲಿ-ಕಲಿಸು' ಅಡಿಯಲ್ಲಿ ಕಲಾಸಂಯೋಜಿತ ಬೋಧನಾ ವಿಧಾನ ಮತ್ತು ಅಭ್ಯಾಸಗಳ ಕುರಿತು ಶಿಕ್ಷಕರಿಗೆ ತರಬೇತಿಗಳ ಆಯೋಜನೆ, ಶಿಕ್ಷಕರು ಮತ್ತು ಕಲಾವಿದರು ನಿರ್ವಹಿಸುವ ಯೋಜನೆಗಳ ಅನುಷ್ಠಾನ, ತರಗತಿಯ ಬೋಧನೆ ಮತ್ತು ಕಲಿಕೆ ಸಂತೋಷದಾಯಕ ಅನುಭವವಾಗುವಂತೆ ಮಾಡುವ ಕಲಾತ್ಮಕ ತೊಡಗಿಸಿಕೊಳ್ಳುವಿಕೆಗೆ ಬೆಂಬಲ ನೀಡುವ ಮೂಲಕ ಸಕ್ರಿಯವಾಗಿ ಕೆಲಸ ಮಾಡಿದೆ. ಈ ಪ್ರಕ್ರಿಯೆಯ ಶಾಲೆಗಳನ್ನು ಸಾಮೂಹಿಕ ಹಂಚಿಕೆ ಮತ್ತು ಜ್ಞಾನ ಉತ್ಪಾದನೆಯ ಕೇಂದ್ರಗಳನ್ನಾಗಿ ಮಾಡುತ್ತಿರುವ ಸಮಭಾವದ ಶಿಕ್ಷಕರು, ನಿರ್ವಾಹಕರು, ಕಲಾವಿದರು ಮತ್ತು ಸಮುದಾಯದ ಸದಸ್ಯರನ್ನು ಹತ್ತಿರ ತಂದಿದೆ. ಇದರ ಮುಂದುವರಿಕೆಯಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಲಾ ಶಿಕ್ಷಣದ ಕುರಿತು ಒಂದು ಪ್ರಾಂತೀಯ ಸಮಾವೇಶವನ್ನು ಆಯೋಜಿಸಲು ನಾವು ಇಚ್ಛಿಸುತ್ತೇವೆ.
ಬಿಂದುಗಳನ್ನು ಸೇರಿಸಿದರೆ ಒಂದು ರೇಖೆಯಾಗುತ್ತದೆ. ಕಲ್ಯಾಣ ಕನಾ೯ಟಕದಲ್ಲಿ ಕಲೆಯ ನೂರಾರು ಬಿಂದಗಳಿವೆ. ಶೈಕ್ಷಣಿಕವಾಗಿ ಅವುಗಳನ್ನು ಒಂದೆಡೆ ತಂದು ಮಕ್ಕಳ ಕಲಿಕೆಗೆ ರೇಖೆಯೊಂದನ್ನು ಬರೆಯೋಣ ಅನ್ನುವುದು ಈ ಪ್ರಯತ್ನ. ಶಿಕ್ಷಕರನ್ನು, ಕಲಾವಿದರನ್ನು, ಶಿಕ್ಷಣ ತಜ್ಞರನ್ನು ಮತ್ತು ಕಲಾ ಸಂಶೋಧಕರನ್ನು ಒಂದೆಡೆ ಸೇರಿಸುವ ಆಲೋಚನೆ.
ಕಾರ್ಯಕ್ರಮ ವಿವರ
ಬುಧವಾರ, ಫೆಬ್ರುವರಿ ೨೨, ೨೦೨೩
ಬೆಳಿಗ್ಗೆ 09:30 ರಿಂದ 10:00 | ನೋಂದಣಿ
10:00 ರಿಂದ 10:15 | ಸ್ವಾಗತ ನುಡಿ
ಅರುಂಧತಿ ಘೋಷ್, ಕಾರ್ಯನಿರ್ವಾಹಕ ನಿರ್ದೇಶಕರು, ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್, ಬೆಂಗಳೂರು
10:15 ರಿಂದ 10:35 | ಪ್ರಾಸ್ತಾವಿಕ ನುಡಿ
ಕೃಷ್ಣಮೂರ್ತಿ ಟಿ ಎನ್, ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ - ಕಲಾ ಶಿಕ್ಷಣ, ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್, ಬೆಂಗಳೂರು
10:45 ರಿಂದ ಮಧ್ಯಾಹ್ನ 12:15 | ಗೋಷ್ಠಿ 1: ಆ-ಸಹ್ಯ ಕಥೆಗಳು
ವಿರೋಧಾಭಾಸಗಳ ನಡುವೆ ನಾವು ನಿಂತಿರುವುದರಿಂದ ಗೋಷ್ಠಿಯ 'ಆ-ಸಹ್ಯ' ಕಥೆಗಳು ಎಲ್ಲಿ ನಿಂತು ಇದನ್ನು ಕೇಳುತ್ತೇವೆ - ಯಾವ ಜಾಗದಲ್ಲಿ ನಿಂತು ಹೇಳುತ್ತೇವೆ ಎನ್ನುವುದನ್ನು ಅವಲಂಬಿಸಿವೆ. ಏಕೆಂದರೆ, ಪ್ರಧಾನ ನೆಲೆಯ ಚಿಂತನೆಗಳನ್ನು ಹಾಗು ವಸಹಾತುಶಾಹಿ ಆಲೋಚನೆಗಳನ್ನು 'ಆರಾಧಿಸುವ' ಕೆಲವೇ ತಜ್ಞರ ಗುಂಪುಗಾರಿಕೆಗಳಿಂದಾಗಿ ನಮ್ಮ ಶಾಲಾ ಶಿಕ್ಷಣದ ಭಾಷ ಚಿಂತನೆಗಳು, ಸ್ತ್ರೀ ಅಸ್ತಿತ್ವದ ದೃಷ್ಟಾಂತಗಳು ಹಾಗು ಕಲಾ ಶಿಕ್ಷಣದ ಪಠ್ಯಕ್ರಮಗಳು ನೀರಸವಾಗುತ್ತಿವೆ. ಹೀಗಾಗಿ ಎಲ್ಲದರಲ್ಲೂ ಹಿಡಿತ ಬಯಸುವ 'ಪ್ರಬಲರ' ನಡುವೆ ಅಸ್ತಿತ್ವ, ಭಾಷಾ ಕಲಿಕೆ, ಸ್ಥಳೀಯ ಸಾಂಸ್ಕೃತಿಕ ಅಸ್ಮಿತೆಗಳು, ಹಾಗು ವಿದ್ಯಾರ್ಥಿಗಳ ನೆಲೆಯಿಂದ ನೋಡುವ ದೃಷ್ಟಿಕೋನಗಳು ಇನ್ನೂ ಸಾಧ್ಯವಾಗುತ್ತಿಲ್ಲ. ಪ್ರಸ್ತುತ ವಿದ್ಯಾರ್ಥಿಗಳ ಆಶೋತ್ತರಗಳನ್ನು ಅಂತರ್ಗತ ಮಾಡಿಕೊಂಡ ಸಮುದಾಯ ಮುಖಿಯಾದ ಚಿಂತನೆ ಮತ್ತು ಹೋರಾಟ ಬಹಳ ಮುಖ್ಯವಾದದ್ದು. ಗೋಷ್ಠಿಯ ‘ಆ-ಸಹ್ಯ’ ಕಥೆಗಳು ಉತ್ತರಗಳನ್ನು ಬರೆಯದ ಬರೀ ಪ್ರಶ್ನೆ ಪತ್ರಿಕೆಗಳು ಅಂದೆನಿಸಬಹುದು.
ಕಲ್ಯಾಣ ಕರ್ನಾಟಕದ ನೆಲದ ಧ್ವನಿ (ಮಕ್ಕಳ ಆಟದ ಹಾಡುಗಳ ಹಿನ್ನೆಲೆಯಲ್ಲಿ)
ಗುಂಡೂರಾವ್ ದೇಸಾಯಿ, ಸಾಹಿತಿಗಳು ಮತ್ತು ಸಹ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ, ಮಸ್ಕಿ, ರಾಯಚೂರು ಜಿಲ್ಲೆ
ಈಚಲು ಮರದ ಕೆಳೆಗೆ ಅಳುತ್ತ ಕುಳಿತ ಶಿಕ್ಷಕನ ಕಥೆ ಹೇಳುವೆ ಕೇಳಿ...
ರಮೇಶ್ ಗಬ್ಬೂರ, ಗ್ರಂಥಪಾಲಕರು ಮತ್ತು ಹಾಡುಗಾರರು, ಸರಕಾರಿ ಪದವಿ ಪೂರ್ವ ಕಾಲೇಜು, ಗಂಗಾವತಿ, ಕೊಪ್ಪಳ ಜಿಲ್ಲೆ
ಶಾಲಾ ವಿದ್ಯಾರ್ಥಿಗಳನ್ನು ಸೆಳೆಯಲು ಸೋತ ದೃಶ್ಯಕಲಾ ಶಿಕ್ಷಣ
ಡಾ. ಸತೀಶ್ ಪಿ ವಾಲ್ಲೆಪುರೆ, ಸಂಯೋಜಕರು, ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯ, ದಾವಣಗೆರೆ
ಪಠ್ಯ ಪುಸ್ತಕಗಳಲ್ಲಿ ಸ್ತ್ರೀ ತಾರತಮ್ಯ ನೆಲೆಗಳು
ಡಾ. ಸುಮಲತಾ ಬಿ ಎಂ, ಸಂಶೋಧಕರು, ಹೊಸಪೇಟೆ, ವಿಜಯನಗರ ಜಿಲ್ಲೆ
ನಿರ್ವಹಣೆ: ವಿಶ್ವೇಶ್ವರಿ ಹಿರೇಮಠ, ರಂಗಕರ್ಮಿಗಳು, ಧಾರವಾಡ
12:15 ರಿಂದ 12:30 | ಬಿಡುವು
12:30 ರಿಂದ 02:00 | ಗೋಷ್ಠಿ 2: ಲೋಕದ ಸಂತೆ
ಇತಿಹಾಸವೆಂದರೆ ರಾಜಪ್ರಭುತ್ವದ ಚರಿತ್ರೆ ಎಂದು ತಿಳಿದ ನಮಗೆ ಜನಪಠ್ಯದ ಇತಿಹಾಸ ಗಮನಕ್ಕೆ ಬರುವುದಿಲ್ಲ. ಇದು ತಣ್ಣನೆಯ ಇತಿಹಾಸ. ಇದರಲ್ಲಿ ಸಂಸ್ಕೃತಿಯ ಎಲ್ಲ ಸಂಘರ್ಷಗಳೂ ಸೂಕ್ಷ್ಮ ಎಲೆಗಳಲ್ಲಿ ಹೆಣಿಗೆಯಾಗಿರುತ್ತದೆ. ಲೋಕದ ಸಂತೆಯ ಆಶಯಗಳು ಯಾವ ವಾದವನ್ನು ಹೂಡುವುದಿಲ್ಲ. ಇದು ಇಂದಿನ ಸಮಾಜದ ವಸ್ತು ಆಶಯ, ವ್ಯಕ್ತಿ ಆಶಯ ಮತ್ತು ಘಟನಾ ಆಶಯಗಳನ್ನು ಹೊಂದಿವೆ. ವಸ್ತುಗಳ ಆಯ್ಕೆ ಚಿಂತನಾಪರವಾದುದು. ಇವೆಲ್ಲಾ ಸಮಾಜದ ಅಂತರರ್ಶಿಸ್ತೀಯ ಘಟಕಗಳು. ಆದುದರಿಂದ ವ್ಯಕ್ತಿ ಸಂಬಂಧಗಳನ್ನು ಹೊರತುಪಡಿಸಿದ ವಿಶೇಷತೆಗಳು ಲೋಕಸಂತೆಯಲ್ಲಿ ಕಡಿಮೆ. ಲೋಕದ ಸಂತೆ ಅನ್ನುವುದು ಸಮುದಾಯದ ವಿಸ್ತರಣೆಗೆ ಇರುವಂತಹುದು. ಈ ಗೋಷ್ಠಿಯ ಚಿಂತನೆಗಳು ಸಾಮಾಜಿಕ ವಿಕಾಸವನ್ನು ಕುರಿತಾದ ನಡೆ. ಕಲೆ, ರಾಜಕೀಯ ಮತ್ತು ಸಾಮಾಜಿಕ ಪುನರ್ಚಿಂತನೆಗಳಿಗೆ ಬಳಸಿಕೊಳ್ಳುವ ಒಂದು ಪ್ರಯತ್ನ.
ಸ್ಥಳೀಯ ಜಾನಪದ ಕಲೆ ಮತ್ತು ಸಾಹಿತ್ಯದ ಮೂಲಕ ಕಲಿಕೆಯ ಸಾಧ್ಯತೆಗಳು ಮತ್ತು ಬಿಕ್ಕಟ್ಟುಗಳು
ಡಾ. ಅರುಣ್ ಜೋಳದ ಕೂಡ್ಲಿಗಿ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿವಿಭಾಗ, ಡಾ. ಬಿ. ಆರ್ ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಕಲಬುರಗಿ
ಬೀದಿ ರಂಗಭೂಮಿಯ ಅಳವಡಿಕೆಯಲ್ಲಿ ಪಠ್ಯಕ್ರಮದ ಸವಾಲುಗಳು ಮತ್ತು ಸಮಸ್ಯೆಗಳು
ಡಾ. ಸಹನಾ ಪಿ, ಅಥಿತಿ ಉಪನ್ಯಾಸಕರು, ಪ್ರದರ್ಶನಕಲೆ ನಾಟಕ ವಿಭಾಗ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ
ಸಾಮಾಜಿಕ ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ಭಿತ್ತಿಚಿತ್ರಗಳು
ಡಾ. ಮಲ್ಲಿಕಾರ್ಜುನ ಸಿ ಬಾಗೋಡಿ, ಅಧ್ಯಾಪಕರು, ದೃಶ್ಯಕಲಾ ಅಧ್ಯಯನ ವಿಭಾಗ, ಗುಲ್ಬರ್ಗ ವಿಶ್ವವಿದ್ಯಾಲಯ, ಕಲಬುರಗಿ
ಕಲ್ಯಾಣ ಕರ್ನಾಟಕದ ಮಕ್ಕಳ ಪತ್ರಿಕೆಗಳು
ಸೋಮು ಕುದರಿಹಾಳ್, ಸಹ ಶಿಕ್ಷಕರು ಮತ್ತು ಮಕ್ಕಳ ಸಾಹಿತಿಗಳು, ಸರಕಾರಿ ಪ್ರಾಥಮಿಕ ಶಾಲೆ ಕುಂಟೋಜಿ ಕ್ಯಾಂಪ್, ಗಂಗಾವತಿ, ಕೊಪ್ಪಳ ಜಿಲ್ಲೆ
ನಿರ್ವಹಣೆ: ಡಾ. ನಿಂಗೂ ಸೊಲಗಿ, ಮುಖ್ಯೋಪಾಧ್ಯಾಯರು ಮತ್ತು ಕಲಾ ಶಿಕ್ಷಣ ತಜ್ಞರು, ಮುಂಡರಗಿ
02:00 ರಿಂದ 02:45 | ಬಿಡುವು
02:45 ರಿಂದ 05:15 ರವರಗೆ | ಪ್ರಾಯೋಗಿಕ ಮತ್ತು ಪ್ರಾತ್ಯಕ್ಷತೆ: ಪರಿಸರ ಶಿಕ್ಷಣದಲ್ಲಿ ಕಲೆಯ ಪಾತ್ರ
ಅಭಿಷೇಕಾ ಕೆ, ಕಲಾ ಶಿಕ್ಷಣ ತಜ್ಞರು ಮತ್ತು ಪರಿಸರ ಅಧ್ಯಯನಕಾರರು
ಸಂಜೆ 06:45 ರಿಂದ 08:30 ರ ವರಗೆ | ಸಾಂಸ್ಕೃತಿಕ ಕಾರ್ಯಕ್ರಮ
ಜೋಗತಿ ಹಾಡುಗಳು | ರಾಮಕ್ಕ ಜೋಗತಿ ಮತ್ತು ತಂಡದವರಿಂದ ಬಳ್ಳಾರಿ
ಲಾವಣಿಗಳು | ಶಂಕರಣ್ಣ ಆರ್ ಸಂಕಣ್ಣನವರ್, ರೋಣ
ಜಾನಪದ ಸಂಗೀತ | ಶೇಖರಪ್ಪ ಮಹಂತ್ ಮತ್ತು ತಂಡದವರಿಂದ, ಇಳಕಲ್
ಗುರುವಾರ, ಫೆಬ್ರುವರಿ ೨೩, ೨೦೨೩
10:15 ರಿಂದ 11:45 | ಗೋಷ್ಠಿ 3: ಆವರಣದಾಚೆಗೆ
ಪಠ್ಯಪುಸ್ತಕವು ಒಂದು 'ಕಾಲ ಯಂತ್ರ'! ಭೌಗೋಳಿಕವಾಗಿ, ಐತಿಹಾಸಿಕವಾಗಿ, ಪೌರಾಣಿಕವಾಗಿ ವೈಜ್ಞಾನಿಕವಾಗಿ......ಹೀಗೆ ಎಲ್ಲಿಂದ ಎಲ್ಲಿಗೆ ಬೇಕಾದರೂ ಹೋಗಬಹುದು. ಭೂತಕಾಲಕ್ಕೆ ಹೇಗೆ ಪ್ರಯಾಣಿಸಬಹುದೋ ಹಾಗೆಯೇ ಭವಿಷ್ಯದತ್ತಲೂ ಹೊರಡಬಹುದು! ಮಾಯಾಲೋಕದೊಂದರಲ್ಲಿ ಹೋಗಿ ಅನುಭವಿಸಬಹುದು. ಆದರೆ ಆಧುನಿಕ ಶಿಕ್ಷಣದ ಪಠ್ಯ ಕ್ರಮಗಳು, ಬೋಧನಾ ಕ್ರಮಗಳು ಮತ್ತು ಪಠ್ಯ ಪುಸ್ತಕದ ವಿನ್ಯಾಸಗಳು ಮಕ್ಕಳ ಆ ಲೋಕವನ್ನು ಸೃಷ್ಟಿಸುವಲ್ಲಿ ಹಲವಾರು ಕಾರಣಗಳಿಂದ ಹಿನ್ನೆಡೆಯನ್ನು ಕಾಣುತ್ತಿದೆ ಮತ್ತೊಂದೆಡೆ ಸಾಧ್ಯತೆಗಳನ್ನು 'ತೃಪ್ತಿಪಡಿಸಲು' ಹೊಸ ಹೊಸ ಯೋಜನೆಗಳು ಜಾರಿಗೆ ಬಂದಂತೆಲ್ಲಾ ಕಲಿಸುವ ಶಿಕ್ಷಕರಿಗೆ ಹೆಚ್ಚೆಚ್ಚು ದಾಖಲೆಗಳನ್ನು ಹುಟ್ಟುಹಾಕುವುದರಲ್ಲೇ ಸಮಯ ವ್ಯರ್ಥವಾಗುತ್ತಿದೆ. ಮಕ್ಕಳ ನಿತ್ಯದ ಅನುಭವಗಳಿಗೆ ಸಂಪರ್ಕ ಸೇತುಗಳು ಸಡಿಲವಾಗುತ್ತಿವೆ. ಈ ಗೋಷ್ಠಿಯು 'ಆವರಣದಾಚೆಗೆ' ಕಂಡ ಸಾಧ್ಯತೆಗಳನ್ನು ಪರಿಚಯಿಸುವ ಸಣ್ಣ ಪ್ರಯತ್ನವಷ್ಟೇ.
ಬೋಧಕರಿಗೆ ವಸ್ತುಸಂಗ್ರಹಾಲಯಗಳ ಸಂಪನ್ಮೂಲಗಳು
ಸಂಜನಾ ರಂಗನ್, ವಸ್ತುಸಂಗ್ರಹಾಲಯಗಳ ಸಲಹೆಗಾರರು, ಪುರಾತತ್ವ ಇಲಾಖೆ, ಹಂಪಿ ವೃತ್ತ
ನಮ್ಮ ಪಠ್ಯಪುಸ್ತಕ
ಮಲ್ಲಿಕಾರ್ಜುನ ಶೆಟ್ಟಿ, ದೃಶ್ಯಕಲಾವಿದರು ಮತ್ತು ಕಲಾ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಕಾಳಗಿ, ಕಲಬುರ್ಗಿ ಜಿಲ್ಲೆ
ಒಳ ಹಾಗು ಬಾಹ್ಯ ಒತ್ತಡಗಳ ನಡುವೆ ಅಸ್ತಿತ್ವದ ಹುಡುಕಾಟದಲ್ಲಿ ಕಿನ್ನಾಳ ಕಲೆ
ಕಿಶನ್ ರಾವ್ ಎ ಕುಲಕರ್ಣಿ, ಸಾಹಿತಿಗಳು ಮತ್ತು ಸಹಶಿಕ್ಷಕರು, ಸರಕಾರಿ ಪ್ರೌಢಶಾಲೆ, ಹನುಮಸಾಗರ, ಕೊಪ್ಪಳ ಜಿಲ್ಲೆ
ಕಲ್ಯಾಣ ಕರ್ನಾಟಕದಲ್ಲಿ ಪೋಷಣೆ ಕಳೆದುಕೊಂಡ ಹಿಂದೂಸ್ತಾನಿ ಸಂಗೀತ
ಇನ್ಸಾಫ್ ಪಿಂಜಾರ, ಹಿಂದೂಸ್ತಾನಿ ಗಾಯಕರು, ಹೊಸಪೇಟೆ, ವಿಜಯನಗರ ಜಿಲ್ಲೆ
ನಿರ್ವಹಣೆ: ಡಾ. ಮಲ್ಲಿಕಾರ್ಜುನ ಕಡಕೋಳ, ಕಲಾ ಸಂಶೋಧಕರು, ಕಲಬುರಗಿ
12:00 ರಿಂದ 01:30 | ನೆನಪಿನ ಸಂಚಿ - ಉಪನ್ಯಾಸ | ಮಂಜಮ್ಮ ಜೋಗತಿ
ಹೊಸಪೇಟೆ ಸಮೀಪದ ಮರಿಯಮ್ಮನಳ್ಳಿಯಲ್ಲಿ ವಾಸವಾಗಿರುವ ಮಂಜಮ್ಮ ಜೋಗತಿಯವರು, ನಾಡಿನ ಪ್ರಸಿದ್ಧ ಜಾನಪದ ಕಲಾವಿದೆಯಾಗಿ, ರಂಗಭೂಮಿಯ ನಟಿಯಾಗಿ ಎಲ್ಲಾ ವಿಧವಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಆದರೆ, ಕೀರ್ತಿಯನ್ನು ಮಾತ್ರ ಅವರು ತಲೆಗೆ ಏರಿಸಿಕೊಂಡವರಲ್ಲ. ಹೊಸಪೇಟೆ ಬಳಿಯ ತುಂಗಭದ್ರಾ ನದಿಯ ದಡದಲ್ಲಿರುವ ಹುಲಿಗೆಮ್ಮ ದೇಗುಲದಲ್ಲಿ ಜೋಗತಿಯಾಗಿ ಧೀಕ್ಷೆ ಪಡೆದು, ದಿಕ್ಕು ದಿಶೆಯಿಲ್ಲದ ಭವಿಷ್ಯದ ಬದುಕು ಏನೆಂದು ತಿಳಿಯದೆ, ಜೋಗತಿ ನೃತ್ಯ, ಜಾನಪದ ನೃತ್ಯದಲ್ಲಿ ಪರಿಣಿತಿ ಸಾಧಿಸಿದರು. ತಮ್ಮೆಲ್ಲಾ ನೋವು, ಕಣ್ಣೀರು ಮತ್ತು ಅಪಮಾನಗಳಿಗೆ ಜಾನಪದ ಕಲೆಯನ್ನು ಮದ್ದಾಗಿಸಿಕೊಂಡರು. ಇಂದು ನಾಡಿನ ಹೆಮ್ಮೆಯ ಕಲಾವಿದೆಯಾಗಿ ರೂಪುಗೊಂಡಿದ್ದಾರೆ*. ಕಲೆ ನನ್ನನ್ನು ರೂಪಿಸಿತು ಎಂದು ಬಲವಾಗಿ ನಂಬಿರುವ ಮಂಜಮ್ಮನವರು, ಕಲಾ ಸಂಯೋಜಿತ ಚಿಂತನೆಗಳ ವಿಶೇಷ ಉಪನ್ಯವನ್ನು ನೀಡಲಿದ್ದಾರೆ.
*ಆಧಾರ ಬುಕ್ ಬ್ರಹ್ಮ
01:45 ರಿಂದ 02:30 | ಬಿಡುವು
02:30 ರಿಂದ 05:15 ರವರಗೆ | ಪ್ರಾಯೋಗಿಕ ಮತ್ತು ಪ್ರಾತ್ಯಕ್ಷತೆ: ಶೈಕ್ಷಣಿಕ ಕಲಿಕೆಯಲ್ಲಿ ಬೆಂಕಿಪೊಟ್ಟಣಗಳ ಬಳಕೆ ಮತ್ತು ಪ್ರಯೋಗ
ಹುಸೇನಿ ಎಸ್. ಎಫ್, ದೃಶ್ಯಕಲಾವಿದರು ಮತ್ತು ಅಂತಾರಾಷ್ಟ್ರೀಯ ಬೆಂಕಿಪೊಟ್ಟಣ ಸಂಗ್ರಹಗಾರರು, ಮೈಸೂರು
ಸಂಜೆ 06:45 ರಿಂದ 08:30 ರ ವರಗೆ | ಸಾಂಸ್ಕೃತಿಕ ಕಾರ್ಯಕ್ರಮ
ಏಕಲವ್ಯ - ಸೂತ್ರದ ಬೊಂಬೆಯಾಟ | ಸರಕಾರಿ ಪ್ರೌಢ ಶಾಲೆ, ಚಿಬ್ಬಲಕೇರಿ, ಹಳಿಯಾಳ, ಹಿರಿಯ ವಿದ್ಯಾರ್ಥಿಗಳಿಂದ
ದೊಡ್ಡಾಟದ ಹೆಜ್ಜೆಗಳು | ಸರಕಾರಿ ಪ್ರೌಢ ಶಾಲೆ, ಜಾಕನಪಲ್ಲಿ, ಸೇಡಂ, ಹಿರಿಯ ವಿದ್ಯಾರ್ಥಿಗಳಿಂದ
ಶುಕ್ರವಾರ, ಫೆಬ್ರುವರಿ ೨೪, ೨೦೨೩
ಬೆಳಿಗ್ಗೆ 07:30 ಕ್ಕೆ | ಸನ್ನತಿ ಉತ್ಖನನ ಸ್ಥಳಕ್ಕೆಭೇಟಿ
ಮಾರ್ಗದರ್ಶಿಗಳು:
ಡಾ. ಆರ್. ಎಚ್. ಕುಲಕರ್ಣಿ, ಮುಖ್ಯಸ್ಥರು, ಕಲಾ ಇತಿಹಾಸ ವಿಭಾಗ, ಚಿತ್ರಕಲಾ ಮಹಾವಿದ್ಯಾಲಯ, ಕರ್ನಾಟಕ ಚಿತ್ರಕಲಾ ಪರಿಷತ್, ಬೆಂಗಳೂರು
ಸಂಜನಾ ರಂಗನ್, ವಸ್ತುಸಂಗ್ರಹಾಲಯಗಳ ಸಲಹೆಗಾರರು, ಪುರಾತತ್ವ ಇಲಾಖೆ, ಹಂಪಿ ವೃತ್ತ
ಮಧ್ಯಾಹ್ನ 03:00 - 03:30 | ಅಭಿಪ್ರಾಯಗಳು
ಸಂಜೆ 04:00 ಗಂಟೆಗೆ | ಮುಕ್ತಾಯ
ಕಲಾ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಆಯೋಜಿಸಿದ ಪ್ರಾದೇಶಿಕ ಸಮ್ಮೇಳನವು ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಮತ್ತು ಫೈನಾನ್ಸ್ ಕಂಪನಿಯ ಬೆಂಬಲದೊಂದಿಗೆ ಸಾಧ್ಯವಾಗಿದೆ.