Call for Presentation Abstracts | Connecting the Dots – Lessons from Arts Education: A Regional Conference | Deadline Extended: February 01, 2023 (CLOSED)

ಬಿಂದುಗಳನ್ನು ಸೇರಿಸುವುದು - ಕಲಾ ಶಿಕ್ಷಣದ ಪಾಠಗಳು

ಪ್ರಾಂತೀಯ ಸಮಾವೇಶ, ಕಲ್ಯಾಣ ಕರ್ನಾಟಕ

ಫೆಬ್ರವರಿ 23-25, 2023 

ಕಲಬುರಗಿ 

ಆಯೋಜನೆ : ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಐಎಫ್‌ಎ)

ವಿಚಾರ ಮಂಡನೆಯ ಸಾರಾಂಶಗಳನ್ನು ಪ್ರಸ್ತುತಪಡಿಸಲು ಆಹ್ವಾನ

ಸಾರಾಂಶಗಳನ್ನು ಸಲ್ಲಿಸಲು ಕೊನೆಯ ದಿನಾಂಕ : Wednesday, February 01, 2023

Click here to read the call in English

`ಬಿಂದುಗಳನ್ನು ಸೇರಿಸುವುದು - ಕಲಾ ಶಿಕ್ಷಣದ ಪಾಠಗಳು’ ಎಂಬ ಈ ಪ್ರಾಂತೀಯ ಸಮಾವೇಶದಲ್ಲಿ ತಮ್ಮ ವಿಚಾರ ಮಂಡನೆಯ ಸಾರಾಂಶಗಳನ್ನು ಪ್ರಸ್ತುತಪಡಿಸಲು ಆಹ್ವಾನಿಸುತ್ತಿದ್ದೇವೆ. ಈ ಪ್ರಸ್ತುತಿಗಳು ಲಿಖಿತಪತ್ರಿಕೆ, ಕಾರ್ಯಾಗಾರಗಳು, ಉಪನ್ಯಾಸ ಪ್ರದರ್ಶನಗಳು, ದುಂಡುಮೇಜಿನ ಚರ್ಚೆಗಳು, ಮಾರ್ಗದರ್ಶಿ ಚಲನಚಿತ್ರ ವೀಕ್ಷಣೆಗಳು, ಪ್ರದರ್ಶನ ಮಾತುಕತೆಗಳು ಮತ್ತು ಸೂಕ್ತವೆಂದು ಪರಿಗಣಿಸಲಾದ ಯಾವುದೇ ರೂಪದಲ್ಲಿರಬಹುದು. ಈ ಮೂಲಕ ಪರಿಕಲ್ಪನೆಗಳು, ಪ್ರಯೋಗಗಳು, ಪರಿಶೋಧನೆಗಳು ಮತ್ತು ಕಲಾಸಂಯೋಜಿತ ಅನುಭವಗಳ ಹಂಚಿಕೆಯನ್ನು ಸಾಧ್ಯವಾಗಿಸುತ್ತದೆ. ಕಲಿಕೆಯ ವಿಧಾನಗಳು. ಸೃಜನಶೀಲ ಮತ್ತು ನವೀನ ಪ್ರಸ್ತುತಿಗಳನ್ನು ನಾವು ಪ್ರೋತ್ಸಾಹಿಸುತ್ತೇವೆ.

ಸಮಾವೇಶದ ಎಲ್ಲಾ ಚರ್ಚೆಗಳು ಮುಖ್ಯವಾಗಿ ಕನ್ನಡದಲ್ಲಿ ನಡೆಯಲಿದ್ದು, ಸ್ಥಳೀಯವಾಗಿ ಮಾತನಾಡುವ ತೆಲುಗು, ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ಸಹ ಪ್ರಸ್ತುತಪಡಿಸಬಹುದು.

ಅವಲೋಕನ :

ಕಳೆದ ದಶಕದಲ್ಲಿ ಕರ್ನಾಟಕದಾದ್ಯಂತ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಐಎಫ್‌ಎ) ಸಂಸ್ಥೆಯು ತನ್ನ `ಕಲಾ ಶಿಕ್ಷಣ’ ಕಾರ್ಯಕ್ರಮದ `ಕಲಿ-ಕಲಿಸು’ ಅಡಿಯಲ್ಲಿ ಕಲಾಸಂಯೋಜಿತ ಬೋಧನಾ ವಿಧಾನ ಮತ್ತು ಅಭ್ಯಾಸಗಳ ಕುರಿತು ಶಿಕ್ಷಕರಿಗೆ ತರಬೇತಿಗಳ ಆಯೋಜನೆ,  ಶಿಕ್ಷಕರು ಮತ್ತು ಕಲಾವಿದರು ನಿರ್ವಹಿಸುವ ಯೋಜನೆಗಳ ಅನುಷ್ಠಾನ,  ತರಗತಿಯ ಬೋಧನೆ ಮತ್ತು ಕಲಿಕೆ ಸಂತೋಷದಾಯಕ ಅನುಭವವಾಗುವಂತೆ ಮಾಡುವ ಕಲಾತ್ಮಕ ತೊಡಗಿಸಿಕೊಳ್ಳುವಿಕೆಗೆ ಬೆಂಬಲ ನೀಡುವ ಮೂಲಕ ಸಕ್ರಿಯವಾಗಿ ಕೆಲಸ ಮಾಡಿದೆ.  ಈ ಪ್ರಕ್ರಿಯೆಯ ಶಾಲೆಗಳನ್ನು ಸಾಮೂಹಿಕ ಹಂಚಿಕೆ ಮತ್ತು ಜ್ಞಾನ ಉತ್ಪಾದನೆಯ ಕೇಂದ್ರಗಳನ್ನಾಗಿ ಮಾಡುತ್ತಿರುವ ಸಮಭಾವದ ಶಿಕ್ಷಕರು, ನಿರ್ವಾಹಕರು, ಕಲಾವಿದರು ಮತ್ತು ಸಮುದಾಯದ ಸದಸ್ಯರನ್ನು ಹತ್ತಿರ ತಂದಿದೆ. ಇದರ ಮುಂದುವರಿಕೆಯಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಲಾ ಶಿಕ್ಷಣದ ಕುರಿತು ಒಂದು ಪ್ರಾಂತೀಯ ಸಮಾವೇಶವನ್ನು ಆಯೋಜಿಸಲು ನಾವು ಇಚ್ಛಿಸುತ್ತೇವೆ.

ಈ ಸಮಾವೇಶವು ಕಲಾ ವಿದ್ವಾಂಸರು, ಕಲಾವಿದರು, ಕಲಾ ಶಿಕ್ಷಣತಜ್ಞರು, ಶಿಕ್ಷಕರು ಮತ್ತು ಆಡಳಿತಗಾರರನ್ನು ಒಂದು ವೇದಿಕೆಗೆ  ತಂದು ಸ್ಥಳೀಯ ಕಲೆಯ ಮೂಲಕ ವಿದ್ಯಾರ್ಥಿಗಳ ಜೀವನವನ್ನು ಮತ್ತು ತರಗತಿಯ ಬೋಧನೆ-ಕಲಿಕೆಯ ಅನುಭವಗಳನ್ನು ಹೇಗೆ ಶ್ರೀಮಂತಗೊಳಿಸಬಹುದು ಎಂಬುದನ್ನು ಚರ್ಚಿಸುವಂತೆ ಮಾಡುವ ಗುರಿಯನ್ನು ಹೊಂದಿದೆ. ಶಿಕ್ಷಕರು, ಕಲಾವಿದರು ಮತ್ತು ಕಲಾ ಶಿಕ್ಷಣತಜ್ಞರು ಪಠ್ಯಕ್ರಮದಲ್ಲಿ ಸಮನ್ವಯತೆಯನ್ನು ಸಾಧಿಸಲು ಕಲೆಯ ವಿವಿಧ ಪ್ರಕಾರಗಳು ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ. ಇದಲ್ಲದೆ, ತರಗತಿಗಳಲ್ಲಿ ಕಲೆಗಳನ್ನು ಬಳಸುವ ಬಗ್ಗೆ ಸೃಜನಾತ್ಮಕವಾಗಿ ಯೋಚಿಸಲು ಶಾಲಾ ಆಡಳಿತವನ್ನು ಪ್ರೋತ್ಸಾಹಿಸಲು ಸಮ್ಮೇಳನವು ಉದ್ದೇಶಿಸಿದೆ ಮತ್ತು ಕಲಿಕೆ ಮತ್ತು ವಿನಿಮಯದ ತಾಣಗಳಾಗುವಲ್ಲಿ ವಸ್ತುಸಂಗ್ರಹಾಲಯಗಳು, ವಿಜ್ಞಾನ ಉದ್ಯಾನವನಗಳು ಮತ್ತು ಗ್ರಂಥಾಲಯಗಳAತಹ ಇತರ ಮಧ್ಯಸ್ಥಗಾರರ ಪಾತ್ರಗಳನ್ನು ಅನ್ವೇಷಿಸುತ್ತದೆ.

ವಿಚಾರ ಮಂಡನೆಯ ಸಾರಾಂಶಗಳನ್ನು ಸಲ್ಲಿಸಲು ಸೂಚನೆಗಳು : 

  • ವಿಚಾರ ಮಂಡನೆಯ ಸಾರಾಂಶಗಳು ಗರಿಷ್ಠ 250 ಪದಗಳಲ್ಲಿ ಇರಬಹುದು ಮತ್ತು ಸ್ಪಷ್ಟ ಶೀರ್ಷಿಕೆಯನ್ನು ಹೊಂದಿರಬೇಕು.
  • ಪ್ರಸ್ತುತಿಗಳು ಈ ಕೆಳಗಿನ ಥೀಮ್‌ಗಳು ಮತ್ತು ವಿಷಯಗಳನ್ನು ಪರಿಗಣಿಸಬಹುದು (ಆದರೆ ಇದಕ್ಕೆ ಸೀಮಿತವಾಗಿರಬೇಕೆಂದಿಲ್ಲ):
  1. ಕಲ್ಯಾಣ ಕರ್ನಾಟಕದ ಸ್ಥಳೀಯ ಸಂಪನ್ಮೂಲಗಳು ಮತ್ತು ಪಠ್ಯಕ್ರಮದ ಸಮಸ್ಯೆಗಳು: ಬೋಧನೆ, ಕಲಿಕೆ ಮತ್ತು ಪಠ್ಯಕ್ರಮದ ಅಭಿವೃದ್ಧಿ
  2. ಆಧುನಿಕ ಡಿಜಿಟಲ್ ಯುಗದಲ್ಲಿ ಸ್ಥಳೀಯ ಕಲೆಗಳನ್ನು ಸಂಶೋಧಿಸುವುದು, ಪ್ರತಿನಿಧಿಸುವುದು ಮತ್ತು ಪರಿವರ್ತಿಸುವುದು
  3. ಕಲ್ಯಾಣ ಕರ್ನಾಟಕದಲ್ಲಿ ಕಲೆಗಳ ದಾಖಲೆ ಮತ್ತು ಸಂಕೇತ
  4. ಇತಿಹಾಸಗಳು ಮತ್ತು ಸಾಂಸ್ಕೃತಿಕ ಆಚರಣೆಗಳೊಂದಿಗೆ ಸಂಪರ್ಕ ಹೊಂದಿದ ಸ್ಥಳೀಯ ಸೈಟ್ ಪರಿಶೋಧನೆಗಳು
  • ಪ್ರಸ್ತುತಿಯ ಸ್ವರೂಪವನ್ನು ಸ್ಪಷ್ಟವಾಗಿ ನಮೂದಿಸಬೇಕು. (ಲಿಖಿತ, ಕಾರ್ಯಾಗಾರ, ಮಾರ್ಗದರ್ಶಿ ಚಲನಚಿತ್ರ ಪ್ರದರ್ಶನ ಇತ್ಯಾದಿ.)
  • ಪ್ರಸ್ತುತಪಡಿಸಲು ಬೇಕಾದ ಸಮಯವನ್ನು ಸಹ ಸ್ಪಷ್ಟವಾಗಿ ನಮೂದಿಸಬೇಕು. ಲಿಖಿತ ಪತ್ರಿಕೆ 20 ನಿಮಿಷಗಳಲ್ಲಿ, ಉಪನ್ಯಾಸ ಪ್ರಾತ್ಯಕ್ಷಿಕೆಗಳು ಮತ್ತು ಪ್ರದರ್ಶನ ಮಾತುಕತೆಗಳು 45 ನಿಮಿಷಗಳಲ್ಲಿ, ಮತ್ತು ಕಾರ್ಯಾಗಾರಗಳು ಮತ್ತು ಮಾರ್ಗದರ್ಶಿ ಚಲನಚಿತ್ರ ಪ್ರದರ್ಶನಗಳು 2 ಗಂಟೆಗಳ ಒಳಗೆ ಇರುವಂತೆ ಸೂಚಿಸಲಾಗಿದೆ.
  • ಪ್ರತಿ ಸಾರಾಂಶ ಸಲ್ಲಿಕೆಯು ಹೆಸರು, ವಿಳಾಸ, ಇಮೇಲ್ ಮತ್ತು ಫೋನ್ ಸಂಖ್ಯೆ ಇರುವ ಒಂದು ಪುಟದ ಸ್ವಪರಿಚಯದೊಂದಿಗೆ ಇರಬೇಕು.
  • ಕೊನೆಯ ದಿನಾಂಕ : February 01, 2023

ಆಯ್ಕೆ ವಿಧಾನ :

ವಿಚಾರ ಮಂಡನೆಯ ಸಾರಾಂಶದ ಆಯ್ಕೆಯನ್ನು ಸ್ಪಷ್ಟ ಕಲ್ಪನೆ, ಸಾಂದರ್ಭಿಕ ಪರಿಚಯ ಮತ್ತು ನಾವಿನ್ಯತೆಯ ಅಂಶಗಳ ಆಧಾರದ ಮೇಲೆ ಮಾಡಲಾಗುವುದು. ಈ ಮೌಲ್ಯಮಾಪನವನ್ನು ಚಿಂತನೆಗಳ ಪ್ರಸ್ತುತತೆ ಹಾಗೂ ಅಸಲೀತನವನ್ನು ಕೂಡ ಪರಿಗಣಿಸಲಾಗುವುದು. ಸೂಕ್ತ ಮಾಹಿತಿಗಳಿರದ ಸಲ್ಲಿಕೆಗಳನ್ನು ಪರಿಗಣಿಸಲಾಗುವುದಿಲ್ಲ.

ಸ್ವೀಕೃತವಾದ ಲೇಖನ ಗಳನ್ನು ಪೂರ್ಣ ರೂಪದಲ್ಲಿ ಫೆಬ್ರವರಿ 18, 2023ರ ಒಳಗೆ ಸಲ್ಲಿಸಬೇಕಾಗುತ್ತದೆ. ಪ್ರಾಯೋಗಿಕ ಪ್ರಸ್ತುತಿಯಾದರೆ ಗುರಿಗಳ ವಿವರವಾದ ಪಟ್ಟಿ ಸಲ್ಲಿಸಬೇಕಾಗುತ್ತದೆ 

ಲೇಖಕರ ಗೈರುಹಾಜರಿಯಲ್ಲಿ ಇತರರು ಪ್ರಸ್ತುತ ಪಡಿಸಲು ಅವಕಾಶ ಇರುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

ಲೇಖನ  ರೂಪದ ಪ್ರಸ್ತುತಿಗಳನ್ನು ಐಎಫ್‌ಎ ಅವುಗಳ ವಿಷಯಗಳನ್ನು ಆಧರಿಸಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟಿಸುವುದು.

ನಿಮ್ಮ ವಿಚಾರ ಮಂಡನೆಯ ಸಾರಾಂಶಗಳನ್ನು ಕೃಷ್ಣಮೂರ್ತಿ ಟಿ.ಎನ್. ರವರಿಗೆ `ಬಿಂದುಗಳನ್ನು ಸೇರಿಸುವುದು - ಕಲಾ ಶಿಕ್ಷಣದ ಪಾಠಗಳು ವಿಚಾರ ಮಂಡನೆಯ ಸಾರಾಂಶ’ ಎಂಬ ವಿಷಯದೊಂದಿಗೆ krishna@indiaifa.org ಈ-ಮೇಲ್ ಮಾಡಿ. 

ಯಾವುದೇ ಪ್ರಶ್ನೆಗಳಿದ್ದಲ್ಲಿ krishna@indiaifa.org ಗೆ ಬರೆಯಿರಿ ಅಥವಾ +91 8762954080 ಗೆ ಕರೆ ಮಾಡಿ.

ಕಲಾ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಆಯೋಜಿಸಿದ ಪ್ರಾದೇಶಿಕ ಸಮ್ಮೇಳನವು
ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಮತ್ತು ಫೈನಾನ್ಸ್ ಕಂಪನಿಯ ಬೆಂಬಲದೊಂದಿಗೆ ಸಾಧ್ಯವಾಗಿದೆ.