Request for Proposals: Curated Artistic Engagements | Applications accepted throughout the Year

ಇಂಡಿಯಾ ಫೌಂಡೇಶನ್‌ ಫಾರ್‌ ದಿ ಆರ್ಟ್ಸ್‌ (IFA)
ಪ್ರಾಜೆಕ್ಟ್‌ 560 ಅಡಿಯಲ್ಲಿ
ಕ್ಯುರೇಟೆಡ್‌ ಆರ್ಟಸ್ಟಿಕ್‌ ಎಂಗೇಜ್‌ಮೆಂಟ್‌ (Curated Artistic Engagements)
ಪ್ರಸ್ತಾವನೆಗಳನ್ನು ಆಹ್ವಾನಿಸುತ್ತದೆ

ಪ್ರಸ್ತಾವನೆಗಳನ್ನು ವರ್ಷಪೂರ್ತಿ ಸ್ವೀಕರಿಸಲಾಗುತ್ತದೆ

Request for Proposals: Curated Artistic Engagements under the Project 560 programme
Applications accepted throughout the year
Click here to read the call in English and here to listen to Harshita Bathwal speak about Curated Artistic Engagements

ಪ್ರಾಜೆಕ್ಟ್‌ 560 ಕುರಿತು

ಪ್ರಾಜೆಕ್ಟ್‌ 560 ಯೋಜನೆಯನ್ನು ಐ.ಎಫ್‌.ಎ ಸಂಸ್ಥೆಯು ಬೆಂಗಳೂರಿಗೆ ವಿಶೇಷವಾಗಿ ಸೀಮಿತಗೊಳಿಸಿದೆ. ಬೆಂಗಳೂರಿನ ಪಿನ್‌ಕೋಡ್‌ನ ಮೊದಲ ಮೂರು ಸಂಖ್ಯೆಗಳನ್ನು ಬಳಸಿಕೊಂಡು ಈ ಯೋಜನೆಯನ್ನು ಹೆಸರಿಸಲಾಗಿದೆ. ಪ್ರಾಜೆಕ್ಟ್‌ 560 ಯೋಜನೆಯು ಕಲಾವಿದರು, ಕಲಾ ತಜ್ಞರು, ಸಂಘ-ಸಂಸ್ಥೆಗಳು, ಹಾಗು ನೆರೆಹೊರೆಯವರೊಂದಿಗೆ ಕ್ರಿಯಾತ್ಮಕವಾಗಿ ಒಡನಾಡುವಂತೆ ಬಯಸುತ್ತದೆ. ಇದರ ಗುರಿ ಜನರಿಗೆ ನಗರದ ವಿಭಿನ್ನ ಅನುಭವಗಳನ್ನು ವಿವಿಧ ಆಯಾಮಗಳಲ್ಲಿ ಅನ್ವೇಷಿಸುವಂತೆ ಮಾಡುವುದಾಗಿದೆ ಹಾಗೂ ನಗರ ಜೀವನವನ್ನು ಸಂಬ೦ಧಗಳೊಂದಿಗೆ ಹೊಸ ಬಗೆಗಳಲ್ಲಿ ಉತ್ಸಾಹದಿಂದ ಕಲ್ಪಿಸಿಕೊಳ್ಳಲು ಸಾಧ್ಯ ಮಾಡುವುದಾಗಿದೆ.

ಪ್ರಾಜೆಕ್ಟ್‌ 560 ಯೋಜನೆಯಡಿಯಲ್ಲಿ ಐ.ಎಫ್‌.ಎ ಸಂಸ್ಥೆಯು ಬೆಂಗಳೂರಿನ ವಾಸಿಗಳಿಗೆ Curated Artistic Engagements ಯೋಜನೆಗಳ (ಕ್ಯುರೇಟೆಡ್‌ ಆರ್ಟಸ್ಟಿಕ್‌ ಎಂಗೇಜ್‌ಮೆಂಟ್‌) ಪ್ರಸ್ತಾವನೆಗಳು ಆಹ್ವಾನಿಸುತ್ತದೆ. ಈ ಯೋಜನೆಗಳು ಬೆಂಗಳೂರನ್ನು ಪ್ರತಿಬಿಂಬಿಸುವ ಹಲವಾರು ಕಲ್ಪನೆಗಳನ್ನು ಒಳಗೊಂಡಿರಬೇಕು. ಇವುಗಳಲ್ಲಿ ಕಥನಗಳು, ಸ೦ಗೀತ, ಪ್ರದರ್ಶನಗಳು, ವಸ್ತು ಪ್ರದರ್ಶನಗಳು, ಇನ್‌ಸ್ಟಲೇಷನ್‌ಗಳು, ಆಟಗಳು, ಉಪನ್ಯಾಸಗಳು, ಸಾರ್ವಜನಿಕ ಚರ್ಚೆಗಳು ಮತ್ತು ಇತರೆ ಹೊಸ ಆಯಾಮಗಳ ಒಳನೋಟಗಳನ್ನು ಅಭಿವ್ಯಕ್ತಿಸಬಹುದು. ಈ ಮೂಲಕ ನಗರದ ಕಲೆ ಮತ್ತು ಸಂಸ್ಕೃತಿಯನ್ನು ಹೊಸ ರೂಪಗಳಲ್ಲಿ ಕಟ್ಟಕೊಳ್ಳಬಹುದು. ಈ ಕ್ಯುರೇಟೆಡ್‌ ಆರ್ಟಸ್ಟಿಕ್‌ ಎಂಗೇಜ್‌ಮೆಂಟ್‌ಗಳ ಪ್ರಸ್ತುತಿಯು ಸಾರ್ವಜನಿಕವಾಗಿರಬೇಕು ಮತ್ತು ಭೌತ್ತಿಕ ಸ್ವರೂಪದಲ್ಲಿರಬೇಕು ಹಾಗೂ ಅಗತ್ಯವಿದ್ದಲ್ಲಿ ಮಾತ್ರ ವರ್ಚುವಲ್‌ ಅಂಶಗಳನ್ನು ಒಳಗೊಳ್ಳಬೇಕು. (ಪೂರ್ಣ ಪ್ರಮಾಣದ ವರ್ಚುವಲ್‌ ಪಸ್ತುತಿಗಳನ್ನು ನಾವು ಪ್ರೋತ್ಸಾಹಿಸುವುದಿಲ್ಲ.)

ಯೋಜನೆಯ ಅವಧಿ: 12 ತಿ೦ಗಳುಗಳ ಅವಧಿಯಲ್ಲಿ 8-10 ಸರಣಿ ಚಟುವಟಿಕೆಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಬೇಕು.

ಬಜೆಟ್‌: ಗರಿಷ್ಠ 5 ಲಕ್ಷ ರೂ. ಉದ್ದೇಶಿತ ಬಜೆಟ್‌ನ ಗರಿಷ್ಠ 35% ವರೆಗೂ ಗೌರವಧನವನ್ನು ತಾವು ವಿನಂತಿಸಬಹುದು.

ಪ್ರಸ್ತಾವನೆಗಳನ್ನು ವರ್ಷಪೂರ್ತಿ ಸ್ವೀಕರಿಸಲಾಗುತ್ತದೆ

ಯಾರು ಅರ್ಜಿ ಸಲ್ಲಿಸಬಹುದು?

ಸ್ವತಂತ್ರ ಸಂಗ್ರಾಹಕರು, ಕ್ಯುರೇಟರ್‌ಗಳು ಮತ್ತು ಕಲಾವಿದರು ಅರ್ಜಿ ಸಲ್ಲಿಸಬಹುದು. ಈ ಯೋಜನೆಯನ್ನು ಒಂದು ವರ್ಷ ನಿರ್ವಹಿಸಬಲ್ಲ ಬೆ೦ಗಳೂರಿನ ಸಾರ್ವಜನಿಕ ಸಂಸ್ಥೆಗಳ ಭಾಗವಾಗಿರುವ ವೈಯುಕ್ತಿಕ ವ್ಯಕ್ತಿಗಳು ಕೂಡ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಬೆ೦ಗಳೂರಿನ ನಿವಾಸಿಗಳಾಗಿರಬೇಕು ಮತ್ತು ಯೋಜನೆಯನ್ನು ಬೆ೦ಗಳೂರಿನಲ್ಲಿಯೇ ಹಮ್ಮಿಕೊಳ್ಳಬೇಕು.

ಅರ್ಹತೆ:

ನೀವು ಭಾರತೀಯ ಪ್ರಜೆಯಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ನಿಮ್ಮ ಸಹಯೋಗಿಗಳು ಸಹಿ ಭಾರತೀಯ ಪ್ರಜೆಗಳಾಗಿರಬೇಕು. ವಿವರಗಳಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿ

ಯೋಜನೆಯ ಪ್ರಸ್ತಾವನೆಗಳನ್ನು ಹೇಗೆ ಕಳುಹಿಸುವುದು?

ಈ ಕೆಳಗಿನ ವಿವರಗಳೊಂದಿಗೆ ನಮಗೆ ಪ್ರಸ್ತಾವನೆಯನ್ನು ಕಳುಹಿಸಿ:

  • ನೀವು ಪಸ್ತುತ ನಡೆಸುತ್ತಿರುವ ಸಂಗ್ರಹ ಕಾರ್ಯ/ಕಲಾ ಅಭ್ಯಾಸ ಮತ್ತು ಬೆಂಗಳೂರಿನ ಕುರಿತಾದ ನಿಮ್ಮ ಕಾಳಜಿಗಳು.
  • ಯೋಜನೆಯ ಕಲ್ಪನೆ, ಕಾರ್ಯ ವಿಧಾನದ ಯೋಜನೆ, ನಿಮ್ಮ ಕಾರ್ಯದ ಭಾಗವಾಗುವ ವ್ಯಕ್ತಿಗಳ ಹಾಗೂ ಸ್ಥಳಗಳ ವಿವರಗಳು.
  •  ಕಾರ್ಯ ಚಟುವಟಿಕೆಗಳ ವಿವರಗಳು ಮತ್ತು ಬಜೆಟ್‌.

ಇಂಗ್ಲಿಷ್ ಸೇರಿದಂತೆ ಯಾವುದೇ ಭಾರತೀಯ ಭಾಷೆಯಲ್ಲಿ ನಿಮ್ಮ ಪ್ರಸ್ತಾವನೆಯನ್ನು ಬರೆಯಲು ನೀವು ಆಯ್ಕೆ ಮಾಡಬಹುದು.

ಪ್ರಸ್ತಾವನೆಗಳೊಂದಿಗೆ ಇವುಗಳನ್ನು ಸೇರಿಸಿ:

  • ನಿಮ್ಮ ಹಿಂದಿನ ಕೆಲಸದ ಬರವಣಿಗೆಗಳು, ಛಾಯಾಚಿತ್ರಗಳು, ಆಡಿಯೋ/ವೀಡಿಯೋ ರೆಕಾರ್ಡಿಂಗ್‌ಗಳಂತಹ ಪೋಷಕ ಸಾಮಗ್ರಿಗಳು.
  • ನಿಮ್ಮ ಅಂಚೆ ವಿಳಾಸ, ದೂರವಾಣಿ ಸಂಖ್ಯೆಗಳು ಮತ್ತು ಇ-ಮೇಲ್‌ ವಿಳಾಸ ಸೇರಿದಂತೆ ಇತ್ತೀಚಿನ ಬಯೋಡೇಟ.

ಇಂಗ್ಲಿಷ್‌ ಸೇರಿದಂತೆ ಯಾವುದೇ ಭಾರತೀಯ ಭಾಷೆಯಲ್ಲಿ ನಿಮ್ಮ ಪ್ರಸ್ತಾವನೆಯನ್ನು ಬರೆಯಲು ನೀವು ಆಯ್ಕೆ ಮಾಡಬಹುದು. ನಿಮ್ಮ ಪ್ರಸ್ತಾವನೆಗಳು ನಮಗೆ ಕಳುಹಿಸುವ ಮೊದಲು ಯೋಜನಾ ವಿಚಾರಗಳನ್ನು ನಮ್ಮೊಂದಿಗೆ ಚರ್ಚಿಸಲು ಬಯಸಿದರೆ ಕಾರ್ಯಕ್ರಮ ನಿರ್ವಾಹಕರಾದ ಹರ್ಷಿತ ಬಟ್ಟಾಳ್‌ ರವರಿಗೆ ಕರೆ ಮಾಡಬಹುದು ಅಥವಾ ಇಮೇಲ್‌ ಬರೆಯಬಹುದು. ನಿಮ್ಮ ಅಂತಿಮ ಪ್ರಸ್ತಾವನೆಗಳು ಎಲ್ಲಾ ಮಾಹಿತಿಗಳೊಂದಿಗೆ, 25 ಎಂ.ಬಿ ಮೀರದ ಒಂದೇ ಇಮೇಲ್‌ನಲ್ಲಿ harshita@indiaifa.org ಸಲ್ಲಿಸಬೇಕು. ಅಪೂರ್ಣ ಪ್ರಸ್ತಾವನೆಗಳು ಮತ್ತು ಅರ್ಹತಾ ಮಾನದಂಡಗಳ ವ್ಯಾಪ್ತಿಗೆ ಬರದಿರುವ ಅರ್ಜಿದಾರರನ್ನು ಪರಿಗಣಿಸಲಾಗುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

ಆಯ್ಕೆ ಪ್ರಕ್ರಿಯೆ:

ನೀವು ನಿಮ್ಮ ಕರಡು ಪ್ರಸ್ತಾವನೆಗಳು ನಮ್ಮೊಂದಿಗೆ ಚರ್ಚಿಸಬಹುದು. ಆಯ್ದ ಪ್ರಸ್ತಾವನೆಗಳು ಆಂತರಿಕ ಹಾಗೂ ಬಾಹ್ಯ ಮೌಲ್ಯಮಾಪನಕ್ಕೆ ಒಳಪಡುತ್ತವೆ. ಬಾಹ್ಯ ತಜ್ಞರ ಸಲಹೆಯ ಮೇರೆಗೆ ಯೋಜನೆಗಳ ಆಯ್ಕೆ ನಡೆಯುತ್ತದೆ. ಯೋಜನೆಗಳ ಕುರಿತು ಐ.ಎಫ್‌.ಎ ಸಂಸ್ಥೆಯ ನಿರ್ಧಾರವೇ ಅಂತಿಮವಾಗಿರುತ್ತದೆ.

ದಯವಿಟ್ಟು ಗಮನಿಸಿ: ಐ.ಎಫ್‌.ಎ ಸಂಸ್ಥೆಯು ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಬದ್ಧವಾಗಿದೆ. ನಮ್ಮ ಸಂಸ್ಥೆಯು ಮಕ್ಕಳು ಸೇರಿದಂತೆ ಪ್ರತಿಯೊಬ್ಬರ ಗೌರವಗಳನ್ನು ಬೆಂಬಲಿಸುತ್ತದೆ ಮತ್ತು ರಕ್ಷಿಸುತ್ತದೆ. ಅರ್ಜಿದಾರರು ಇದರೊಂದಿಗೆ ಹೊಂದಿಕೆಯಾಗಬೇಕು ಮತ್ತು ಅದನ್ನು ಎಲ್ಲ ಸಮಯದಲ್ಲೂ ಎತ್ತಿ ಹಿಡಿಯಬೇಕು.

ನಮ್ಮ 560 | ನಮ್ಮ ಪ್ರಾಜೆಕ್ಟ್‌ | ನಮ್ಮ ಪಿನ್‌ಕೋಡ್‌

ಪ್ರಾಜೆಕ್ಟ್ 560 ಯೋಜನೆಗಳನ್ನು ಬಿ ಎನ್ ಪಿ ಪರಿಬಾಸ್ ಇಂಡಿಯಾ ಬೆಂಬಲಿಸುತ್ತದೆ.