UDAKA - Learnings from Arts Education: A Regional Conference | February 21-23, 2024, Mangalore
ಉದಕ
ಕಲಾ ಶಿಕ್ಷಣದ ಪಾಠಗಳು
ಆಯೋಜನೆ: ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್, ಬೆಂಗಳೂರು
೨೧, ೨೨ ಮತ್ತು ೨೩, ಫೆಬ್ರವರಿ, ೨೦೨೪
ಸಹೋದಯ, ಆರ್ಯ ಸಮಾಜ ರಸ್ತೆ, ಮಂಗಳೂರು
Udaka - Learnings from Arts Education
A Regional Conference organised by India Foundation for the Arts
February 21, 22 and 23, 2024
Sahodaya, Arya Samaja Road, Mangalore
Click here for the schedule in English
ಕಳೆದ ದಶಕದಲ್ಲಿ ಕರ್ನಾಟಕದಾದ್ಯಂತ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಐಎಫ್ಎ) ಸಂಸ್ಥೆಯು ತನ್ನ `ಕಲಾ ಶಿಕ್ಷಣ’ ಕಾರ್ಯಕ್ರಮದ `ಕಲಿ-ಕಲಿಸು’ ಅಡಿಯಲ್ಲಿ ಕಲಾಸಂಯೋಜಿತ ಬೋಧನಾ ವಿಧಾನ ಮತ್ತು ಅಭ್ಯಾಸಗಳ ಕುರಿತು ಶಿಕ್ಷಕರಿಗೆ ತರಬೇತಿಗಳ ಆಯೋಜನೆ, ಶಿಕ್ಷಕರು ಮತ್ತು ಕಲಾವಿದರು ನಿರ್ವಹಿಸುವ ಯೋಜನೆಗಳ ಅನುಷ್ಠಾನ, ತರಗತಿಯ ಬೋಧನೆ ಮತ್ತು ಕಲಿಕೆ ಸಂತೋಷದಾಯಕ ಅನುಭವವಾಗುವಂತೆ ಮಾಡುವ ಕಲಾತ್ಮಕ ತೊಡಗಿಸಿಕೊಳ್ಳುವಿಕೆಗೆ, ಬೆಂಬಲ ನೀಡುವ ಮೂಲಕ ಸಕ್ರಿಯವಾಗಿ ಕೆಲಸ ಮಾಡಿದೆ. ಈ ಪ್ರಕ್ರಿಯೆ ಶಾಲೆಗಳನ್ನು ಸಾಮೂಹಿಕ ಹಂಚಿಕೆ ಮತ್ತು ಜ್ಞಾನ ಉತ್ಪಾದನೆಯ ಕೇಂದ್ರಗಳನ್ನಾಗಿ ಮಾಡುತ್ತಿರುವ ಸಮಭಾವದ ಶಿಕ್ಷಕರು, ನಿರ್ವಾಹಕರು, ಕಲಾವಿದರು ಮತ್ತು ಸಮುದಾಯದ ಸದಸ್ಯರನ್ನು ಹತ್ತಿರ ತಂದಿದೆ.
‘ಉದಕ- ಕಲಾ ಶಿಕ್ಷಣದ ಪಾಠಗಳು’ - ಕರಾವಳಿ ಕರ್ನಾಟಕದಲ್ಲಿ ನಡೆಯುವ ಸ್ಥಾನೀಯ ಸಮ್ಮೇಳನವು ಕಲಾ ವಿದ್ವಾಂಸರು, ಕಲಾವಿದರು, ಕಲಾ ಶಿಕ್ಷಣತಜ್ಞರು, ಶಿಕ್ಷಕರು ಮತ್ತು ಆಡಳಿತಗಾರರನ್ನು ಒಂದು ವೇದಿಕೆಗೆ ತಂದು ಸ್ಥಳೀಯ ಕಲೆಯ ಮೂಲಕ ವಿದ್ಯಾರ್ಥಿಗಳ ಜೀವನವನ್ನು ಮತ್ತು ತರಗತಿಯ ಬೋಧನೆ-ಕಲಿಕೆಯ ಅನುಭವಗಳನ್ನು ಹೇಗೆ ಶ್ರೀಮಂತಗೊಳಿಸಬಹುದು ಎಂಬುದನ್ನು ಚರ್ಚಿಸುವಂತೆ ಮಾಡುವ ಗುರಿಯನ್ನು ಹೊಂದಿದೆ. ಶಿಕ್ಷಕರು, ಕಲಾವಿದರು ಮತ್ತು ಕಲಾ ಶಿಕ್ಷಣತಜ್ಞರು ಪಠ್ಯಕ್ರಮದಲ್ಲಿ ಸಮನ್ವಯತೆಯನ್ನು ಸಾಧಿಸಲು ಕಲೆಯ ವಿವಿಧ ಪ್ರಕಾರಗಳು ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ. ಸಮ್ಮೇಳನವು ವಿಚಾರ ಗೋಷ್ಠಿಗಳು, ಪ್ರಾತ್ಯಕ್ಷತೆಗಳು, ಮತ್ತು ಕಲಾ ಪ್ರದರ್ಶನಗಳ ಮೂಲಕ ಕಲಾ ಸಂಯೋಜಿತ ಕಲಿಕೆಯ ವಿಧಾನಗಳ ಪರಿಕಲ್ಪನೆಗಳು, ಪ್ರಯೋಗಗಳು, ಪರಿಶೋಧನೆಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಸ್ಥಳಾವಕಾಶವನ್ನು ನೀಡುತ್ತದೆ.
ಕಾರ್ಯಕ್ರಮ ವಿವರಗಳು
ಬುಧವಾರ ಫೆಬ್ರುವರಿ ೨೧, ೨೦೨೪
10:00 AM - 10:30 AM | ನೋಂದಣಿ
10:45 AM - 11:00 AM | ಸ್ವಾಗತ ನುಡಿ: ಮೇನಕ ರೊಡ್ರಿಗಸ್
ಕಾರ್ಯನಿರ್ವಾಹಕ ನಿರ್ದೇಶಕರು, ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಐ ಎಫ್ ಎ), ಬೆಂಗಳೂರು
11:00 AM - 11:15 AM | ಪ್ರಾಸ್ತಾವಿಕ ನುಡಿ: ಕೃಷ್ಣಮೂರ್ತಿ ಟಿ ಎನ್
ಹಿರಿಯ ಕಾರ್ಯ ನಿರ್ವಹಣಾಧಿಕಾರಿಗಳು - ಕಲಾ ಶಿಕ್ಷಣ, ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಐ ಎಫ್ ಎ), ಬೆಂಗಳೂರು
11:30 AM - 01:30 PM | ಗೋಷ್ಠಿ 1: ಕಲಾ ಶಿಕ್ಷಣ: ಭಾಷಾ ಕಲೆ - ಅನುಭವ ಮತ್ತು ಅಭಿವ್ಯಕ್ತಿ
ಈ ಗೋಷ್ಠಿಯು ಜ್ಞಾನದ ಪ್ರಸರಣ ಮತ್ತು ಭಾಷಾ ಕಲಾ ಶಿಕ್ಷಣದಲ್ಲಿ ಪಾಶ್ಚಿಮಾತ್ಯ ಪರಿಕಲ್ಪನೆಗಳ ಸ್ವೀಕಾರ, ಇಂಗ್ಲಿಷ್ ಭಾಷೆಯ ವ್ಯಾಪ್ತಿ ಮತ್ತು ಅದರ ಪ್ರಭಾವವನ್ನು ಪರಿಶೋಧಿಸುತ್ತದೆ. ಇದನ್ನು ಅನುಸರಿಸಿದಂತೆ ಈ ಗೋಷ್ಠಿಯು ಬಹುಸಂಸ್ಕೃತಿಯ ಮತ್ತು ಬಹುಭಾಷಾ ತರಗತಿಗಳಲ್ಲಿ ಮಾತೃಭಾಷೆಯ ಪ್ರಾಮುಖ್ಯತೆ, ಹಂಚಿಕೆಯ ಅನುಭವಗಳು ಮತ್ತು ಬೋಧನಾ ಸವಾಲುಗಳನ್ನು ಸಹ ಚರ್ಚಿಸುವ ಗುರಿಯನ್ನು ಹೊಂದಿದೆ.
ವಿಷಯ ಮಂಡನೆ:
ಅಕ್ಷತಾ ಕೃಷ್ಣಮೂರ್ತಿ, ಸಹ ಶಿಕ್ಷಕರು, ಝೋಯಿಡಾ
ನಾಗರಾಜ ಎಂ ಹುಡೇದ, ಸಹ ಶಿಕ್ಷಕರು, ಹಾವೇರಿ
ಮಹಮ್ಮದ್ ಬದ್ದೂರ್, ತುಳು ಮತ್ತು ಬ್ಯಾರಿ ಭಾಷಾ ತಜ್ಞರು, ಮಂಗಳೂರು
ಪ್ರಕಾಶ್ ಮೂಡಿತ್ತಾಯ, ಉಪಪ್ರಾಂಶುಪಾಲರು, ಸುಳ್ಯ
ನಿರ್ವಹಣೆ:
ಡಾ ಆನಂದ ಪಾಟೀಲ್, ಮಕ್ಕಳ ಸಾಹಿತಿಗಳು ಮತ್ತು ಸಂಶೋಧಕರು, ಧಾರವಾಡ
01:45 PM - 02:45 PM | ಭೋಜನ ವಿರಾಮ
03:00 PM - 05:00 PM | ಕಾರ್ಯಾಗಾರ: ಸಿದ್ದಿ ಸಮುದಾಯದೊಂದಿಗೆ ಕೌದಿ ಕಲಿಕೆ
ಈ ಕಲಾ ಸಂಯೋಜಿತ ಕಾರ್ಯಾಗಾರವನ್ನು ಸಿದ್ದಿ ಸಮುದಾಯದ ಕೌದಿ ಕಲಾವಿದರಾದ ಹಜರಂಬಿ, ಹುಸೇನಬಿ, ಹತ್ತರಬಿ, ಮತ್ತು ಸಖೀನಾ ಅವರು ಸುಗಮಕಾರರಾದ ಅನಿತಾ ಎನ್ ಅವರೊಂದಿಗೆ ನಡೆಸಲಿದ್ದಾರೆ. ನಾವು ತರಗತಿಯಲ್ಲಿ ಕಾಣುವ ಗಣಿತದ ಸಮ್ಮಿತಿಗಳು ಮತ್ತು ಕೌದಿ ಕಲಾವಿದರ ಕ್ರಿಯಾತ್ಮಕ - ಕಲಾತ್ಮಕ ದೃಶ್ಯ ಚಿತ್ರಣಗಳ ನಡು
06:00 PM - 07:00 PM | ಮುಖ್ಯ ಭಾಷಣಕಾರರು: ಡಾ ಕೆ ಚಿನ್ನಪ್ಪಗೌಡ
ಜಾನಪದ ವಿಶ್ವವಿದ್ಯಾನಿಲಯ ವಿಶ್ರಾಂತ ಉಪಕುಲಪತಿಗಳು, ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರಾಗಿ ಕಾರನಿರ್ವಹಿಸಿರುತ್ತಾರೆ. ಭೂತಾರಾಧನೆ, ಜನಪದೀಯ ಅಧ್ಯಯನ, ಮತ್ತು ಸಂಸ್ಕೃತಿ ಸಿರಿ, ಇವರ ಕೆಲವು ಸಾಹಿತ್ಯ ಕೃತಿಗಳಾಗಿವೆ.
07:30 PM - 08:30 PM | ಪ್ರದರ್ಶನ: ತುಳು ಪಾಡ್ದನ - ನಟ್ಟಿ ಹಾಡುಗಳು
ಈ ಮೌಖಿಕ ಜಾನಪದ ಗೀತೆಗಳು, ಕೃಷಿ ಮತ್ತು ಪ್ರಕೃತಿಯ ವಿಷಯಗಳೊಂದಿಗೆ ದಲಿತ ರೈತರ ಹೋರಾಟಗಳನ್ನು ಸಹ ನಿರೂಪಿಸುತ್ತವೆ. ಈ ಹಾಡುಗಳನ್ನು ತುಳು ಮತ್ತು ಕನ್ನಡ ಭಾಷೆಯಲ್ಲಿ ವ್ಯಾಖ್ಯಾನಗಳೊಂದಿಗೆ ಪರಿಚಯಿಸಲಾಗುತ್ತದೆ.
ಕಲಾವಿದರು:
ಬಟ್ಟು ಮೂಲ್ಯ, ಜಾನಪದ ಕಲಾವಿದರು, ಕುಂಬ್ಳೆ
ಪ್ರದೀಪ ಕುಮಾರ್, ಸಹ ಶಿಕ್ಷಕರು, ಮಂಜೇಶ್ವರ
ಗುರುವಾರ, ಫೆಬ್ರುವರಿ ೨೨, ೨೦೨೪
10:30 AM - 01:15 PM | ಕಾರ್ಯಾಗಾರ: ಸಿದ್ದಿ ಸಮುದಾಯದೊಂದಿಗೆ ಕೌದಿ ಕಲಿಕೆ
ಈ ಕಲಾ ಸಂಯೋಜಿತ ಕಾರ್ಯಾಗಾರವನ್ನು ಸಿದ್ದಿ ಸಮುದಾಯದ ಕೌದಿ ಕಲಾವಿದರಾದ ಹಜರಂಬಿ, ಹುಸೇನಬಿ, ಹತ್ತರಬಿ, ಮತ್ತು ಸಖೀನಾ ಅವರು ಸುಗಮಕಾರರಾದ ಅನಿತಾ ಎನ್ ಅವರೊಂದಿಗೆ ನಡೆಸಲಿದ್ದಾರೆ. ನಾವು ತರಗತಿಯಲ್ಲಿ ಕಾಣುವ ಗಣಿತದ ಸಮ್ಮಿತಿಗಳು ಮತ್ತು ಕೌದಿ ಕಲಾವಿದರ ಕ್ರಿಯಾತ್ಮಕ - ಕಲಾತ್ಮಕ ದೃಶ್ಯ ಚಿತ್ರಣಗಳ ನಡು
01:30 PM - 02:30 PM | ಭೋಜನ ವಿರಾಮ
02:45 PM - 04:30 PM | ಪ್ರದರ್ಶನ: ತಾಳ ಮದ್ದಳೆ - ಸುಗ್ರೀವ ಸಖ್ಯ
ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ, ಅಳ್ಳಂಕಿ, ಹೊನ್ನಾವರ ವಿದ್ಯಾರ್ಥಿಗಳಿಂದ
06:00 PM - 07:45 PM | ಗೋಷ್ಠಿ 2: ಕಲಾ ಶಿಕ್ಷಣ: ಪರಿಕಲ್ಪನೆಗಳು ಮತ್ತು ಪ್ರಾದೇಶಿಕ ಸವಾಲುಗಳು
ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಳೀಯ ಜಾನಪದ, ಕಲಾ ಪ್ರಕಾರಗಳು, ಕರಕುಶಲ ವಸ್ತುಗಳು ಮತ್ತು ಸಮುದಾಯದ ಸಹಭಾಗಿತ್ವವನ್ನು ಅಳವಡಿಸಿಕೊಳ್ಳುವ ಮೌಲ್ಯವನ್ನು ನಾವು ಗುರುತಿಸುತ್ತೇವೆ. ಆದರೆ, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005ರ ಪ್ರಕಾರ ಹೆಚ್ಚಿನ ಪೋಷಕರು ತಮ್ಮ ಮಕ್ಕಳು ಕಲೆಗಳನ್ನು ಕಲಿಯುವುದರಿಂದ ನಿರುತ್ಸಾಹಗೊಳಿಸುತ್ತಾರೆ. ಹಾಗೆಂದೇ, ಇತರ ವಿಷಯಗಳ ಜೊತೆಗೆ ಕಲೆಗಳನ್ನು ಕಲಿಸುವುದನ್ನು ಒಳಗೊಂಡ ಸಮತೋಲಿತ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕಾಗಿದೆ. ಕಲೆಯ ರಾಷ್ಟ್ರೀಯ ಪರಿಕಲ್ಪನೆಗಳನ್ನು ನಿರ್ಮಿಸಲು ಕೊಡುಗೆ ನೀಡುವಲ್ಲಿ ಪ್ರಾದೇಶಿಕ ಕಲೆ ಮತ್ತು ಸಾಂಸ್ಕೃತಿಕ ಉದಾಹರಣೆಗಳ ಮಹತ್ವ ಮತ್ತು ಅನ್ವಯವನ್ನು ಈ ಗೋಷ್ಠಿಯು ಅನ್ವೇಷಿಸುತ್ತದೆ.
ವಿಷಯ ಮಂಡನೆ:
ಡಾ ಅಶೋಕ್ ಕಾಮತ್, ಉಪಪ್ರಾಂಶುಪಾಲರು, ಡಯಟ್, ಉಡುಪಿ
ಡಾ ಶ್ವೇತ ಮಡಪ್ಪಾಡಿ, ಜಾನಪದ ಸಂಶೋಧಕರು, ಮೈಸೂರು
ಸುಭಾಸ್ ಚಂದ್ರ ಬಸು, ವಾಸ್ತುಶಿಲ್ಪಿ, ಮಂಗಳೂರು
ನೇಮಿರಾಜ ಶೆಟ್ಟಿ, ದೃಶ್ಯಕಲಾವಿದರು ಮತ್ತು ಕಲಾ ವಿಮರ್ಶಕರು, ಮಂಗಳೂರು
ಮೌನೇಶ್ ವಿಶ್ವಕರ್ಮ, ರಂಗ ಕರ್ಮಿಗಳು ಮತ್ತು ಪತ್ರಿಕಾ ವರದಿಗಾರರು
ಡಾ ಸದಾನಂದ ಬೈಂದೂರ್, ಸಹ ಶಿಕ್ಷಕರು, ಕುಂದಾಪುರ
ನಿರ್ವಹಣೆ:
ಐ ಕೆ ಬೋಳುವಾರ್, ರಂಗ ಕರ್ಮಿಗಳು ಮತ್ತು ವಿಮರ್ಶಕರು
ಶುಕ್ರವಾರ, ಫೆಬ್ರುವರಿ ೨೩, ೨೦೨೪
10:30 AM - 01:15 PM | ಗೋಷ್ಠಿ 3: ಕಲಾ ಶಿಕ್ಷಣ: ವಿಧಾನಗಳು ಮತ್ತು ಅಭ್ಯಾಸಗಳಲ್ಲಿ ಪ್ರಯೋಗಗಳು
ಈ ಗೋಷ್ಠಿಯು ಶಾಲಾ ಶಿಕ್ಷಣದ ಕಲಾ ಯೋಜನೆಗಳು, ವಿಧಾನಗಳು ಹಾಗು ಪಠ್ಯಕ್ರಮಗಳೊಂದಿಗೆ ನಡೆದಿರುವ ಕಲಾ ಸಂಯೋಜಿತ ಚಟುವಟಿಕೆಗಳ ಪ್ರಯಾಣವನ್ನು ಹುಡುಕುವ ಪ್ರಯತ್ನವನ್ನು ನಡೆಸುತ್ತದೆ. ಇದಲ್ಲದೆ, ಸಮುದಾಯಗಳ ಭಾಗಿದಾರತ್ವಗಳ ಉದಾಹರಣೆಗಳನ್ನು ಸಹ ಪರಿಚಯಿಸುತ್ತದೆ.
ವಿಷಯ ಮಂಡನೆ:
ಪ್ರಜ್ಞಾ ಹೆಗಡೆ, ಸಹಶಿಕ್ಷಕರು, ಶಿರಸಿ
ಕ್ರಿಸ್ಟೋಫೆರ್, ಉಪನ್ಯಾಸಕರು, ಮತ್ತು ರಂಗ ನಿರ್ದೇಶಕರು, ಮಂಗಳೂರು
ಉದಯ ಗಾವಂಕಾರ, ಸಹ ಶಿಕ್ಷಕರು, ಕುಂದಾಪುರ
ಕಿರಣ್ ಭಟ್, ರಂಗ ಕರ್ಮಿಗಳು, ಹೊನ್ನಾವರ
ನಿರ್ವಹಣೆ:
ಡಾ ಗಾಯತ್ರಿ ನಾವಡ, ಸಂಶೋಧಕರು, ಕುಂದಾಪುರ
01:30 PM - 02:30 PM | ಭೋಜನ ವಿರಾಮ
02:45 PM - 04:30 PM | ಕಾರ್ಯಾಗಾರ: ಸಿದ್ದಿ ಸಮುದಾಯದೊಂದಿಗೆ ಕೌದಿ ಕಲಿಕೆ
ಈ ಕಲಾ ಸಂಯೋಜಿತ ಕಾರ್ಯಾಗಾರವನ್ನು ಸಿದ್ದಿ ಸಮುದಾಯದ ಕೌದಿ ಕಲಾವಿದರಾದ ಹಜರಂಬಿ, ಹುಸೇನಬಿ, ಹತ್ತರಬಿ, ಮತ್ತು ಸಖೀನಾ ಅವರು ಸುಗಮಕಾರರಾದ ಅನಿತಾ ಎನ್ ಅವರೊಂದಿಗೆ ನಡೆಸಲಿದ್ದಾರೆ. ನಾವು ತರಗತಿಯಲ್ಲಿ ಕಾಣುವ ಗಣಿತದ ಸಮ್ಮಿತಿಗಳು ಮತ್ತು ಕೌದಿ ಕಲಾವಿದರ ಕ್ರಿಯಾತ್ಮಕ - ಕಲಾತ್ಮಕ ದೃಶ್ಯ ಚಿತ್ರಣಗಳ ನಡು
05:00 PM - 05:15 PM | ವಂದನಾರ್ಪಣೆ: ರಾಧಿಕಾ ಭಾರದ್ವಾಜ್
ಕಾರ್ಯ ನಿರ್ವಹಣಾಧಿಕಾರಿಗಳು, ಕಲಾಶಿಕ್ಷಣ, ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಐ ಎಫ್ ಎ), ಬೆಂಗಳೂರು
ಕಲಾ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಆಯೋಜಿಸಿದ ಪ್ರಾದೇಶಿಕ ಸಮ್ಮೇಳನವು ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಮತ್ತು ಫೈನಾನ್ಸ್ ಕಂಪನಿಯ ಬೆಂಬಲದೊಂದಿಗೆ ಸಾಧ್ಯವಾಗಿದೆ.